
17th October 2025
ಹಿರೇಬಾಗೇವಾಡಿ- ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಹಿರೇ ಬಾಗೇವಾಡಿಯಲ್ಲಿ ಇಂದು ನಡೆದ 1992 ನೇ ಮಧ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಕೆ. ಪಿ. ಸಿ. ಸಿ. ಸದಸ್ಯರಾದ ರೋಹಿಣಿ ಬಾಬಾಸಾಹೇಬ ಪಾಟೀಲ ರವರು ಉದ್ಘಾಟಿಸಿ, ಮಾತನಾಡಿದ ಅವರು ಆಡು ಮುಟ್ಟದ ಸೊಪ್ಪಿಲ್ಲ, ಪೂಜ್ಯ ಖಾವಂದರು,ಮಾಡದ ಕಾರ್ಯಕ್ರಮಗಳಿಲ್ಲ, ಪ್ರತಿ ಸಲವೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ
ಯೋಜನೆಯ ಮನೆಮಗಳಾಗಿ ಭಾಗವಹಿಸಲು ಸಂತೋಷ ಆಗುತ್ತದೆ, ನಾನು ಕೂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದಲ್ಲಿ ಸದಸ್ಯಳಾಗಿ, 10000 /-ರೂ ಸಾಲ ಪಡೆದು ವ್ಯವಹಾರವನ್ನ ಮಾಡುತ್ತಿದ್ದೇನೆ, ಅದರಲ್ಲಿಯೂ ಕೂಡ ಪೂಜ್ಯ ಅಮ್ಮನವರು ಜ್ಞಾನವಿಕಾಸದ ಮೂಲಕ ಮಾಡುವ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
*ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರು ಶ್ರೀ ನಟರಾಜ ಬಾದಾಮಿ ಸರ್ ಅವರು ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಅಂದರೆ ಅದು ಕುಡುಕರು, ಅಂತಹ ವ್ಯಕ್ತಿಗಳಿಗೆ ಶಿಬಿರ ಮಾಡಿ, ಅವರನ್ನು ಪಾನಮುಕ್ತರಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವವರು ಇದ್ದರೆ, ಅದು ಪರಮ ಪೂಜ್ಯ ಖಾವಂದರು ಎಂದರು....*
*ಸಭೆಯಲ್ಲಿ ಜಿಲ್ಲಾ ನಿರ್ದೇಶಕರು ಸತೀಶ ನಾಯ್ಕ್, ಜನಜಾಗೃತಿ ಯೋಜನಾಧಿಕಾರಿ ಭಾಸ್ಕರ್ ಏನ್, ಜಿಲ್ಲಾ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಗ್ರಾಮ ಪಂಚಾಯತ ಅಧ್ಯಕ್ಷರು ಸರ್ವ ಸದಸ್ಯರು ಒಕ್ಕೂಟ ಸದಸ್ಯರು ಗುರು ಹಿರಿಯರು ಯೋಜನೆಯ ಮೇಲ್ವಿಚಾರಕರ ಶ್ರೇಣಿಯ ಸಿಬ್ಬಂದಿಗಳು ಸೇವಾ ಉಪಸ್ಥಿತರಿದ್ದರು..*
ಬಡ ವ್ಯಾಪಾರಿಗಳು ಜೀವನೋಪಾಯ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ : ಎಸ್. ದೇವಾನಂದ
ಮುತ್ತಗಾ ಗ್ರಾಮದಲ್ಲಿ ಕೂಲಿ ಸಮಾಜದ ಮಹಾ ಶರಣ, ನಿಜಶರಣ ಅಂಬಿಗರ ಚೌಡಯ್ಯನ ಮೂರ್ತಿಗೆ ಅಪಮಾನ ಮಾಡಿದವರನ್ನು ಬಂಧಿಸುವಂತೆ ಹಲವು ಭಾರಿ ಒತ್ತಾಯ ಮಾಡಿದರೂ ಯಾವುದೇ ಕ್ರಮಕೈಗೊಳ್ಳದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪ್ರಶ್ನೆ ಮಾಡಿದವರನ್ನು ಬಂಧಿಸುವುದು ಯಾವ ನ್ಯಾಯ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ
ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸ್ಥಳದಲ್ಲಿಯೇ ಮೃತಪಟ್ಟ ಕೆ. ಬೋದೂರು ಗ್ರಾಮದ ನಿವಾಸಿ ಅಮರೇಶ